Posts

Showing posts from May, 2024

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

Image
ಶಿರಾ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ಹೆಸರು ಮಾಜಿ ಶಾಸಕರಾದ ದಿವಂಗತ ಪಿ ಮೂಡ್ಲೆಗೌಡ ರವರ ದ್ವಿತೀಯ ಪುತ್ರ ತಡಕಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಸಮಾಜಸೇವಕರು ಆದ ಶ್ರೀ ಸಿಎಂ ಮುಕುಂದೇಗೌಡ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ  ಶ್ರೀಯುತರು ದಿನಾಂಕ 9-1-1958 ರಲ್ಲಿ ಜನಿಸಿದ್ದು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ, ಇವರ ತಂದೆ ಶ್ರೀ ಪಿ ಮೂಡ್ಲೆ ಗೌಡ ಜನತಾ ಪರಿವಾರದ ಶಾಸಕರಾಗಿ ಬೆಳೆದವರಾಗಿದ್ದು ಇವರ ಚಿಕ್ಕಪ್ಪ ಸಿಪಿ ಮೂಡಲಗಿರಿಯಪ್ಪ ಮೊನ್ನೆ ತಾನೆ ದೈವಾಧೀನರಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು  ಶ್ರೀಯುತ ಮುಕುಂದೇಗೌಡರು ತಡಕಲೂರು  ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಆಗಿದ್ದು ಅನೇಕ ಸಮಾಜ ಸೇವಗಳಲ್ಲಿ ಹೆಸರುವಾಸಿಯಾಗಿದ್ದರು ಮಾಜಿ ಶಾಸಕರಾದ ಡಾಕ್ಟರ್ ಸಿ ಎಂ ರಾಜೇಶ್ ಗೌಡರವರ ಸಹೋದರರಾದ ಶ್ರೀ ಸಿಎಂ ಮುಕುಂದೇಗೌಡ ಇವರ ಅಂತ್ಯಕ್ರಿಯೆಯನ್ನು ನಾಳೆ ಮೃತರ ಸ್ವಗ್ರಾಮವಾದ ಚಿರತಹಳ್ಳಿಲ್ಲಿರುವ ಮೃತರ ತೋಟದ ಬಳಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ