Posts

Showing posts from January, 2023
Image

ಸಿರಾ ನಗರವಿಡಿ ಕೇಸರಿಮಯ

Image
Date 5-೦1-2023 ದಿನಾಂಕ 6 3 2023 ಶುಕ್ರವಾರದಂದು ನಡೆಯಲಿರುವ ಜನ ಸಂಕಲ್ಪ ಯಾತ್ರೆಗೆ ಇಡೀ ಶಿರಾ ನಗರ ಸಜ್ಜುಗೊಂಡಿದೆ ಬಿಜೆಪಿಯ ಧ್ವಜದ ಬಣ್ಣಕ್ಕಿಂತ ಬರೀ ಕೇಸರಿ ಬಣ್ಣದಿಂದ ಶಿರಾ ನಗರ ರಾರಾಜಿಸುತ್ತಿದೆ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ನಾಯಕರು ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜಯಪ್ರಕಾಶ್ ನಡ್ಡ ಶಿರಾ ನಗರಕ್ಕೆ ಆಗಮಿಸುತ್ತಿದ್ದು ಪೊಲೀಸ್ ಇಲಾಖೆಯಿಂದ ಬಾರಿ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ, ಶಿರಾ ನಗರದ ಮುಖ್ಯಬೀದಿಗಳೆಲ್ಲವೂ ಕೇಸರಿ ಧ್ವಜಗಳಿಂದ ರಾರಾಜಿಸುತ್ತಿದ್ದು ಧ್ವಜಗಳು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್ ಗಳಿಂದ ಸಿರಾ ನಗರ ತುಂಬಿ ತುಳುಕುತ್ತಿದೆ, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ ಇತ್ತೀಚಿನ ಪವರ್ ಟಿವಿ ಹಾಗೂ ಇತರ ಟಿವಿ ಚಾನೆಲ್ ಗಳು ಮತ್ತು ಯೂಟ್ಯೂಬ್ ಚಾನೆಲ್ ಗಳ ಸರ್ವೆಯಲ್ಲಿ ಬಿಜೆಪಿ ಪಕ್ಷವು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದರಿಂದ ಈ ಕಾರ್ಯಕ್ರಮ  ಅದ್ದೂರಿಯಾಗಿ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಉಮ್ಮಸ್ಸನ್ನು ತುಂಬಲು ಸಿರಕ್ಷೇತ್ರದ ಶಾಸಕ ರಾಜೇಶ್ ಗೌಡ ರಾಜ್ಯ ಬಿಜೆಪಿ ನಾಯಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮೂರು ನಾಲ್ಕು ದಿನಗಳಿಂದಲೂ ಸಹ ತಯಾರಿ ನಡೆಸಿರುತ್ತಾರೆ ರಾಷ್ಟ್ರೀಯ ಅಧ್ಯಕ್ಷರ...

ಇಂದು ಏಕಾದಶಿ ಆಚರಣೆ

Image
ದಿನಾಂಕ 2 ಜನವರಿ 2023 ಸೋಮವಾರ ರಂದು ಶಿರಾ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ತಿಮ್ಮಪ್ಪನ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಯಾಗುತ್ತಿದ್ದು  ಸಾಯಂಕಾಲ ವೈಕುಂಠ ಬಾಗಿಲು ಮೂಲಕ ಪ್ರವೇಶ ಮಾಡುವ ಮೂಲಕ ಆಚರಿಸಲಾಗುತ್ತದೆ ನಿನ್ನೆಯಿಂದಲೇ ದೇವಸ್ಥಾನವನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಿದ್ದು ಆವರಣವನ್ನೆಲ್ಲ ಸ್ವಚ್ಛ ಮಾಡಿ ಭಕ್ತಾದಿಗಳಿಗೆ ಇಂದು ಪೂರ್ತಿ ದೇವಸ್ಥಾನವನ್ನು ವಿಶೇಷ ಪೂಜೆ ಗಾಗಿ ಸಿದ್ಧಪಡಿಸಲಾಗಿದೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಪೂಜಾರಿ ಜಗನ್ನಾಥ್ ಪೂಜಾರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದ್ದು ಅಕ್ಕ ಪಕ್ಕದ ಗ್ರಾಮದ ನೂರಾರು ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆ ಇದ್ದೂ  ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ  ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಪ್ರತಿ ವರ್ಷ ಭೇಟಿ ಕೊಟ್ಟ ಸ್ವಾಮಿಯ ದರ್ಶನ ಮಾಡಿರುತ್ತಾರೆ ನಿನ್ನೆಯಿಂದಲೇ ದೇವಸ್ಥಾನಕ್ಕೆ ಜಗಮಗಿಸುವ ವಿದ್ಯುತ್ ದೀಪಾಲಂಕಾರಮಾಡಲಾಗಿತ್ತು