ಸಿರಾ ನಗರವಿಡಿ ಕೇಸರಿಮಯ

Date 5-೦1-2023
ದಿನಾಂಕ 6 3 2023 ಶುಕ್ರವಾರದಂದು ನಡೆಯಲಿರುವ ಜನ ಸಂಕಲ್ಪ ಯಾತ್ರೆಗೆ ಇಡೀ ಶಿರಾ ನಗರ ಸಜ್ಜುಗೊಂಡಿದೆ ಬಿಜೆಪಿಯ ಧ್ವಜದ ಬಣ್ಣಕ್ಕಿಂತ ಬರೀ ಕೇಸರಿ ಬಣ್ಣದಿಂದ ಶಿರಾ ನಗರ ರಾರಾಜಿಸುತ್ತಿದೆ
ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ನಾಯಕರು ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜಯಪ್ರಕಾಶ್ ನಡ್ಡ ಶಿರಾ ನಗರಕ್ಕೆ ಆಗಮಿಸುತ್ತಿದ್ದು ಪೊಲೀಸ್ ಇಲಾಖೆಯಿಂದ ಬಾರಿ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ,
ಶಿರಾ ನಗರದ ಮುಖ್ಯಬೀದಿಗಳೆಲ್ಲವೂ ಕೇಸರಿ ಧ್ವಜಗಳಿಂದ ರಾರಾಜಿಸುತ್ತಿದ್ದು ಧ್ವಜಗಳು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್ ಗಳಿಂದ ಸಿರಾ ನಗರ ತುಂಬಿ ತುಳುಕುತ್ತಿದೆ,
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ ಇತ್ತೀಚಿನ ಪವರ್ ಟಿವಿ ಹಾಗೂ ಇತರ ಟಿವಿ ಚಾನೆಲ್ ಗಳು ಮತ್ತು ಯೂಟ್ಯೂಬ್ ಚಾನೆಲ್ ಗಳ ಸರ್ವೆಯಲ್ಲಿ ಬಿಜೆಪಿ ಪಕ್ಷವು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದರಿಂದ ಈ ಕಾರ್ಯಕ್ರಮ  ಅದ್ದೂರಿಯಾಗಿ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಉಮ್ಮಸ್ಸನ್ನು ತುಂಬಲು ಸಿರಕ್ಷೇತ್ರದ ಶಾಸಕ ರಾಜೇಶ್ ಗೌಡ ರಾಜ್ಯ ಬಿಜೆಪಿ ನಾಯಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮೂರು ನಾಲ್ಕು ದಿನಗಳಿಂದಲೂ ಸಹ ತಯಾರಿ ನಡೆಸಿರುತ್ತಾರೆ ರಾಷ್ಟ್ರೀಯ ಅಧ್ಯಕ್ಷರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಜನರನ್ನು ಸೇರಿಸುವ ಮೂಲಕ ವಿರೋಧಪಕ್ಷಗಳಿಗೆ ಉತ್ತರ ನೀಡಲು ಹಾಗು ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸಲು ತೀರ್ಮಾನಿಸಿದ್ದು ನಾಳೆ ನಡೆಯುವ ಕಾರ್ಯಕ್ರಮದ ಎಲ್ಲ ರಿಗೂ ಕುತೂಹಲ ಮೂಡಿಸಿದೆ

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ