ಶಿರಾ ತಾಲೂಕ್ ಹಾರೋಗೆರೆ ನ್ಯಾಯಬೆಲೆ ಅಂಗಡಿಯ ತನಿಖೆಯ ದಾರಿ ತಪ್ಪಿಸಿದ ಜಂಟಿ ನಿರ್ದೇಶಕ ಆಹಾರ ಇಲಾಖೆ ತುಮಕೂರು

11-12-2023ಸೋಮವಾರ ಶಿರಾ ತಾಲೂಕಿನ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮೇಲೆ 2018 ರಲ್ಲಿ ಕೊಟ್ಟಿದ್ದ ದೂರಿನ ಆಧಾರದ ಮೇಲೆ ತನಿಖೆಗೆ ಚೆಂಟಿ ನಿರ್ದೇಶಕರು ಆಹಾರ ಇಲಾಖೆ ಇವರು ಮಾಡಬೇಕಾಗಿತ್ತು. ದೂರುದಾರನಾದ ಸಿದ್ಧ ಗಂಗಪ್ಪ ಯಲ್ಪೇನಹಳ್ಳಿ ಎಂಬುವರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸರಿ ಸುಮಾರು ರಾತ್ರಿ 9:30 ಗಂಟೆಗೆ ಫೋನ್ ಮೂಲಕ ಕರೆ ಮಾಡಿ ದಿನಾಂಕ 11 ರಂದು ಬೆಳಿಗ್ಗೆ 10:30ಕ್ಕೆ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮುಂದೆ ಹಾಜರಾಗಬೇಕು ಎಂದು ತಿಳಿಸಿರುತ್ತಾರೆ. ಆದರೆ ಇವರು ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲಿ ಅಂದರೆ ರಾತ್ರಿ 9:00ಗೆ ಅನಧಿಕೃತವಾಗಿ ವಿಷಯ ತಿಳಿಸಿರುತ್ತಾರೆ. ಇದಕ್ಕೆ ಪೂರ್ವ ನಿಯೋಜಿತವಾಗಿ ನ್ಯಾಯಬೆಲೆ ಅಂಗಡಿಯ ಶಾಂತಪ್ಪ ಎನ್ನುವರಿಗೆ ಕರೆ ಮಾಡಿ ಅಂದು ರಾತ್ರಿ ಹಾರೋಗೆರೆ ಕಾಲೋನಿಯ ಕೆಲವು ಮಹಿಳೆಯರು ಮತ್ತು ಇತರರನ್ನು ನ್ಯಾಯಬೆಲೆ ಅಂಗಡಿಯ ಮಾಲೀಕರ ಪರವಾಗಿ ಮಾತನಾಡುವಂತಹವರನ್ನು ಕರೆಸಲು ಹೇಳಿರುತ್ತಾರೆ. ಆದರೆ ದೂರುದಾರನಿಗೆ ದೂರುದಾರರ ಪರವಾಗಿ ಮಾತನಾಡುವ ಯಾವುದೇ ರೇಷನ್ ಕಾರ್ಡ್ ತರನು ಕರೆಸುವಂತೆ ಸೂಚಿಸಿರಲಿಲ್ಲ ಬೆಳಗ್ಗೆ 10:30ಗೆ ಬರುವಂತೆ ಫೋನ್ ಮೂಲಕ ತಿಳಿಸಿದ್ದರಿಂದ ದೂರುದಾರ ಸಿದ್ದಗಂಗಪ್ಪ 10 ಗಂಟೆಗೆ ಸರಿಯಾಗಿ ಹಾರೋಗೆರೆಯ ನ್ಯಾಯ ಬೆಲೆ ಅಂಗಡಿಗೆ ಬಂದಿರುತ್ತಾನೆ, ಆದರೆ 10:30ಕ್ಕೆ ತನಿಖೆಗಾಗಿ ಕರೆದಿದ್ದ ಜೆಡಿರವರು ಸುಮಾರು ಮದ್ಯಾನ 12 ಮುಕ್ಕಾಲು ಆದರೂ ಬಂದಿರಲಿಲ್ಲ ತಡವಾಗಿ ಬಂದು ಏಕಮುಖವಾಗಿ ವಿಚಾರ ಆರಂಭಿಸುತ್ತಾರೆ ಈ ಸಮಯದಲ್ಲಿ ಸಿದ್ದಗಂಗಪ್ಪ ನವರಿಗೆ ತಮ್ಮ ವಾದ ಮಂಡಿಸಲು ಅಲ್ಲಿ ಕರೆಸಿದ್ದ ಕಾರ್ಡುದಾರರು ಅವಕಾಶ ನೀಡದೆ ಸಿದ್ದಗಂಗಪ್ಪನವರನ್ನ ಏಕವಚನದಲ್ಲಿ ನಿಂದಿಸಿರುತ್ತಾರೆ. ಇದೇ ಸಮಯದಲ್ಲಿ ನ್ಯಾಯಬೆಲೆಯ ಅಂಗಡಿ ಮಾಲೀಕರಿಗೆ ಸಿದ್ದಗಂಗಪ್ಪನವರ ಸಂಬಂಧಿ ದೇವೇಂದ್ರ ಎನ್ನುವರು ಸಿದ್ದಗಂಗಪ್ಪನಿಗೆ ವಿರೋಧ ಇರುವುದು ಗೊತ್ತಿದ್ದು ಉದ್ದೇಶಪೂರ್ವಕವಾಗಿ ಅವರನ್ನು ಕರೆಸಿ, ಪೂರ್ವ ನಿಯೋಜಿತವಾಗಿ ಅವರನ್ನು ಪುಸಿಲಾಯಿಸಿ ತನಿಖೆ ಸಮಯದಲ್ಲ ಸಿದ್ದಗಂಗಪ್ಪನವರನ್ನು ಹಲ್ಲೆ ಮಾಡಿಸಿರುತ್ತಾರೆ. ಈ ಸಮಯದಲ್ಲಿ ಗ್ರಾಮದ ಅನೇಕ ಜನರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುತ್ತಾರೆ ಆದರೆ ಸಿದ್ದಗಂಗಪ್ಪನ ಜೊತೆ ಯಾರು ಇರದ ಕಾರಣ ಅರೆಬರೆ ಚಿತ್ರೀಕರಣ ಮಾಡಿಕೊಂಡ ಸಿದ್ದಗಂಗಪ್ಪ ಬರಗೂರು ಆಸ್ಪತ್ರೆಯ ಮುಂದೆ ಕುಳಿತು ಮಾಧ್ಯಮದವರಾದ ನನಗೆ ದೂರವಾಣಿ ಮೂಲಕ ನೆಡೆದ ಘಟನೆ ವಿವರಿಸಿರುತ್ತಾರೆ
ಆಗ ನಾನು ಸದರಿ ವ್ಯಕ್ತಿಯನ್ನು ಬರಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸುಮಾರು ಮಧ್ಯಾಹ್ನ 3:30ಕ್ಕೆ ತದನಂತರ ಆಸ್ಪತ್ರೆ ಮುಂಭಾಗದಲ್ಲಿ ಕುಳಿತು ಜಂಟಿ ನಿರ್ದೇಶಕರು ಆಹಾರ ಇಲಾಖೆ ತುಮಕೂರು ರವರಿಗೆ ಫೋನ್ ಮಾಡಿದಾಗ ಸದರಿ ಜಂಟಿ ನಿರ್ದೇಶಕ ಮಂಟೇಸ್ವಾಮಿಯವರು ಮೊಬೈಲ್ನಲ್ಲಿ ಒಂದು ರೀತಿ ಏಕವಚನದಲ್ಲಿ ದೂರುದಾರನನ್ನೇ ನಿಂದಿಸಿ ಅವನು ಹುಚ್ಚ ಎಂದು ಹೇಳಿರುತ್ತಾರೆ ಆಗ ನಾನು ಒಬ್ಬ ದಲಿತ ವ್ಯಕ್ತಿ ನ್ಯಾಯ ಕೇಳಿದಾಗ ನೀವು ಹುಚ್ಚ ಎಂದು ಹೇಳುತ್ತೀರಾ ತನಿಖೆ ಮಾಡಲು ನೀವು ಬಂದಾಗ ಜೊತೆಗೆ ಒಬ್ಬ ಆರಕ್ಷಕರನ್ನು ಏಕೆ ಕರೆ ತರಲಿಲ್ಲ ಈ ರೀತಿ ಜನ ಕೂಡಿಕೊಂಡಾಗ ಗಲಾಟೆ ಆಗುವುದು ಸಹಜ ನೀವು ಒಬ್ಬ ಜಿಲ್ಲಾ ಅಧಿಕಾರಿಯಾಗಿ ನಿಮ್ಮ ಮುಂದೆ ಹಲ್ಲೆ ಮಾಡಿದರು ಅದನ್ನು ತಡೆಯುವಲ್ಲಿ ನೀವು ವಿಫಲರಾಗಿದ್ದೀರಿ ದೂರುದಾರನಿಗೆ ರಕ್ಷಣೆ ಕೊಡಲು ನಿಮ್ಮಿಂದ ಸಾಧ್ಯವಿಲ್ಲದ ಮೇಲೆ ದೂರುದಾರರನ್ನ ಏಕೆ ಕರೆಸಿದ್ದೀರಿ ಎಂದು ಕೇಳಿದರೆ ಸೋಶಿಯಲ್ ಮೀಡಿಯಾ ವರದಿಗಾರನಾದ ನನಗೆ ಏನು ಏನು ಅದು ಬರೋಕೊತಿಯ ಬರ್ಕೊ ಎಂದು ಏಕವಚನದಲ್ಲಿ ಮಾತನಾಡಿರುತ್ತಾರೆ. ಇದು ನನಗೊಬ್ಬನಿಗೆ ಮಾಡಿದ ಅವಮಾನವಲ್ಲ ಇಡೀ ಪತ್ರಿಕಾ ರಂಗದವರನ್ನೇ ನಿಮ್ಮಿಂದ ಏನು ಆಗದು ನಾವು ಮಾಡಿದ್ದೆ ಕಾನೂನು ಎನ್ನುವ ರೀತಿಯಲ್ಲಿ ಮಾತನಾಡಿ ಇಡಿ ಮಾಧ್ಯಮ ಜಗತ್ತಿಗೆ ಅವಮಾನ ಮಾಡಿರುತ್ತಾರೆ
ತದನಂತರ  ಸಂಜೆ ನಾಲಕ್ಕರಿಂದ ಸುಮಾರು ರಾತ್ರಿ ಎಂಟು ಮುಕ್ಕಾಲು ಗಂಟೆಯವರೆಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸದರಿ ದೂರುದಾರ ಸಿದ್ದಗಂಗಪ್ಪ ಮತ್ತು ನಾನು ಹಾಗೂ ಇತರರು ಠಾಣೆಯಲ್ಲಿದ್ದು ನ್ಯಾಯಬೆಲೆ ಅಂಗಡಿಯ ಮಾಲೀಕ ಹಾಗೂ ತನಿಖೆಗೆ ತೆರಳಿದ ಅಧಿಕಾರಿಗಳ ಮೇಲೆ ದೂರು ಅರ್ಜಿ  ಸಿದ್ದಗಂಗಪ್ಪನವರ ಕಡೆಯಿಂದ ನೀಡಲಾಗಿದೆ ಇದಾದ ನಂತರ ಅನೇಕ ಬೆಳವಣಿಗೆಗಳು ನಡೆದಿದ್ದು ಅಧಿಕಾರಿಯು ದೂರು ನೀಡದಂತೆ ಪ್ರಭಾವ ಬೀರುತ್ತಿದ್ದು ಮುಂದುವರಿದಿರುತ್ತದೆ ಇದು ಯಾವ ಹಂತಕ್ಕೆ ಹೋಗು ನಿಲ್ಲುತ್ತದೆ ಎಂದು ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಶ್ನೆ ಇಷ್ಟೇ ನನ್ನಲ್ಲಿರುವ ಆಡಿಯೋದಲ್ಲಿ ದೂರುದಾರನೇ ತಪ್ಪು ಎಂದಿರುವ ಜಂಟಿ ನಿರ್ದೇಶಕರು ತದನಂತರ ನ್ಯಾಯಬೆಲೆ ಅಂಗಡಿಯ ಮೇಲೆ ಕ್ರಮ ಕೈಗೊಂಡಿರುವುದು ಹೇಗೆ ಸಾಧ್ಯ ಕಾನೂನಿನ ಕುಣಿಕೆ ಹೆದರಿ ಎಲ್ಲಿ ತನ್ನ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗುತ್ತಿದೆಯೋ ಎಂಬ ಭಯಕ್ಕೆ ದೂರುದಾರನ ಮೇಲೆ ಎಲ್ಲಾ ತರನಾದ ಒತ್ತಡ ಹಾಕುತ್ತಾ ತನ್ನ ವಿರುದ್ಧ ಕೇಸ್ ದಾಖಲಿಸದಂತೆ ಅನೇಕ ದಲಿತ ಮುಖಂಡರಿಂದ ಒತ್ತಡ ಏರುತ್ತಿದ್ದಾರೆ ಆದ್ದರಿಂದ ದಯವಿಟ್ಟು ತುಮಕೂರು ಜಿಲ್ಲಾ ಆಹಾರ ಜಂಟಿ ನಿರ್ದೇಶಕರನ್ನ ಅಮಾನತ್ತಿನಲ್ಲಿಟ್ಟು ಅವರ ಫೋನ್ ಕರೆಗಳು ಮತ್ತು ನ್ಯಾಯಬೆಲೆ ಅಂಗಡಿಯ ಮಾಲೀಕರು ಎಲ್ಲಾ ಕರೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಈ ಸರ್ಕಾರದಲ್ಲಿ ಮನವಿ.

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ