ಶಿರಾ ತಾಲೂಕ್ ಹಾರೋಗೆರೆ ನ್ಯಾಯಬೆಲೆ ಅಂಗಡಿಯ ತನಿಖೆಯ ದಾರಿ ತಪ್ಪಿಸಿದ ಜಂಟಿ ನಿರ್ದೇಶಕ ಆಹಾರ ಇಲಾಖೆ ತುಮಕೂರು
11-12-2023ಸೋಮವಾರ ಶಿರಾ ತಾಲೂಕಿನ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮೇಲೆ 2018 ರಲ್ಲಿ ಕೊಟ್ಟಿದ್ದ ದೂರಿನ ಆಧಾರದ ಮೇಲೆ ತನಿಖೆಗೆ ಚೆಂಟಿ ನಿರ್ದೇಶಕರು ಆಹಾರ ಇಲಾಖೆ ಇವರು ಮಾಡಬೇಕಾಗಿತ್ತು. ದೂರುದಾರನಾದ ಸಿದ್ಧ ಗಂಗಪ್ಪ ಯಲ್ಪೇನಹಳ್ಳಿ ಎಂಬುವರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸರಿ ಸುಮಾರು ರಾತ್ರಿ 9:30 ಗಂಟೆಗೆ ಫೋನ್ ಮೂಲಕ ಕರೆ ಮಾಡಿ ದಿನಾಂಕ 11 ರಂದು ಬೆಳಿಗ್ಗೆ 10:30ಕ್ಕೆ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮುಂದೆ ಹಾಜರಾಗಬೇಕು ಎಂದು ತಿಳಿಸಿರುತ್ತಾರೆ. ಆದರೆ ಇವರು ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲಿ ಅಂದರೆ ರಾತ್ರಿ 9:00ಗೆ ಅನಧಿಕೃತವಾಗಿ ವಿಷಯ ತಿಳಿಸಿರುತ್ತಾರೆ. ಇದಕ್ಕೆ ಪೂರ್ವ ನಿಯೋಜಿತವಾಗಿ ನ್ಯಾಯಬೆಲೆ ಅಂಗಡಿಯ ಶಾಂತಪ್ಪ ಎನ್ನುವರಿಗೆ ಕರೆ ಮಾಡಿ ಅಂದು ರಾತ್ರಿ ಹಾರೋಗೆರೆ ಕಾಲೋನಿಯ ಕೆಲವು ಮಹಿಳೆಯರು ಮತ್ತು ಇತರರನ್ನು ನ್ಯಾಯಬೆಲೆ ಅಂಗಡಿಯ ಮಾಲೀಕರ ಪರವಾಗಿ ಮಾತನಾಡುವಂತಹವರನ್ನು ಕರೆಸಲು ಹೇಳಿರುತ್ತಾರೆ. ಆದರೆ ದೂರುದಾರನಿಗೆ ದೂರುದಾರರ ಪರವಾಗಿ ಮಾತನಾಡುವ ಯಾವುದೇ ರೇಷನ್ ಕಾರ್ಡ್ ತರನು ಕರೆಸುವಂತೆ ಸೂಚಿಸಿರಲಿಲ್ಲ ಬೆಳಗ್ಗೆ 10:30ಗೆ ಬರುವಂತೆ ಫೋನ್ ಮೂಲಕ ತಿಳಿಸಿದ್ದರಿಂದ ದೂರುದಾರ ಸಿದ್ದಗಂಗಪ್ಪ 10 ಗಂಟೆಗೆ ಸರಿಯಾಗಿ ಹಾರೋಗೆರೆಯ ನ್ಯಾಯ ಬೆಲೆ ಅಂಗಡಿಗೆ ಬಂದಿರುತ್ತಾನೆ, ಆದರೆ 10:30ಕ್ಕೆ ತನಿಖೆಗಾಗಿ ಕರೆದಿದ್ದ ಜೆಡಿರವರು ಸುಮಾರು ಮದ್ಯಾನ 12 ಮುಕ್ಕಾಲು ಆದರೂ ಬಂದಿರಲಿಲ್ಲ ತಡವಾಗಿ ಬಂದು ಏಕಮುಖವ...
Comments
Post a Comment