ಇಂದು ಏಕಾದಶಿ ಆಚರಣೆ
ದಿನಾಂಕ 2 ಜನವರಿ 2023 ಸೋಮವಾರ ರಂದು ಶಿರಾ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ತಿಮ್ಮಪ್ಪನ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಯಾಗುತ್ತಿದ್ದು ಸಾಯಂಕಾಲ ವೈಕುಂಠ ಬಾಗಿಲು ಮೂಲಕ ಪ್ರವೇಶ ಮಾಡುವ ಮೂಲಕ ಆಚರಿಸಲಾಗುತ್ತದೆ ನಿನ್ನೆಯಿಂದಲೇ ದೇವಸ್ಥಾನವನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಿದ್ದು ಆವರಣವನ್ನೆಲ್ಲ ಸ್ವಚ್ಛ ಮಾಡಿ ಭಕ್ತಾದಿಗಳಿಗೆ ಇಂದು ಪೂರ್ತಿ ದೇವಸ್ಥಾನವನ್ನು ವಿಶೇಷ ಪೂಜೆ ಗಾಗಿ ಸಿದ್ಧಪಡಿಸಲಾಗಿದೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಪೂಜಾರಿ ಜಗನ್ನಾಥ್ ಪೂಜಾರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದ್ದು ಅಕ್ಕ ಪಕ್ಕದ ಗ್ರಾಮದ ನೂರಾರು ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆ ಇದ್ದೂ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಪ್ರತಿ ವರ್ಷ ಭೇಟಿ ಕೊಟ್ಟ ಸ್ವಾಮಿಯ ದರ್ಶನ ಮಾಡಿರುತ್ತಾರೆ ನಿನ್ನೆಯಿಂದಲೇ ದೇವಸ್ಥಾನಕ್ಕೆ ಜಗಮಗಿಸುವ ವಿದ್ಯುತ್ ದೀಪಾಲಂಕಾರಮಾಡಲಾಗಿತ್ತು
Comments
Post a Comment