Posts

Showing posts from August, 2023

ಪರಿಷತ್ ಸದಸ್ಯ ಎಂ ಚಿದಾನಂದ ಗೌಡ ರವರಿಂದ ಬರದ ಬಗ್ಗೆ ಅಧ್ಯಯನ

Image
ಶಿರಾ ತಾಲ್ಲೂಕಿನ ಪ್ರಮುಖ ಬೆಳೆಯಾದ ಶೇಂಗಾ ಬೆಳೆಯು ಈ ವರ್ಷ ಮಳೆ ಬಾರದೆ ಶೇಕಡ 25% ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ 25% ಬೆಳೆಯು ಕೂಡ ಸತತ ಬರಗಾಲ ಉಂಟಾಗಿ ಬೆಳೆ ಕೈಗೆಟುಕದೆ ರೈತಾಪಿ ವರ್ಗ ಸಂಕಷ್ಟದಲ್ಲಿರುವುದು ವಿಧಾನ ಪರಿಷತ್ ಶಾಸಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸನ್ಮಾನ್ಯ ಚಿದಾನಂದ್ ಎಂ ಗೌಡ್ರು ರೈತರ ಕಷ್ಟ ಕೇಳಲು ಶಿರಾ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಕೊಟ್ಟು, ಊರಿನ ರೈತ ಮುಖಂಡರುಗಳ ಸಮಾಲೋಚನೆ ನಡೆಸಿ. *ತಾವೇ ಖುದ್ದಾಗಿ ರೈತರ ಜಮೀನಿಗಳಿಗೆ ಭೇಟಿ ನೀಡಿ ಕುಂದು ಕೊರತೆಗಳ ಕುರಿತು ಚರ್ಚಿಸಲಿದ್ದಾರೆ.* ಇದರ ಭಾಗವಾಗಿ ದಿನಾಂಕ *27.08.2023 ರಂದು ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ರವರು ಭೇಟಿ ನೀಡಲಿರುವ ಗ್ರಾಮಗಳು ಕೆಳಕಂಡಂತಿರುತ್ತವೆ.* *1) ಬೆಳಗ್ಗೆ - 10:00 ಕ್ಕೆ -- ಉಗಣೆಕಟ್ಟೆ ಗೇಟ್* (ಮೇಲ್ಕುಂಟೆ ಗ್ರಾಮ ಪಂಚಾಯ್ತಿ) *2) ಬೆಳಗ್ಗೆ - 11:00 ಕ್ಕೆ -- ಬರಗೂರು* (ಬರಗೂರು ಗ್ರಾಮ ಪಂಚಾಯ್ತಿ) *3) ಬೆಳಗ್ಗೆ - 11:30 ಕ್ಕೆ -- ವೀರಬೊಮ್ಮನಹಳ್ಳಿ* (ಹೊಸಹಳ್ಳಿ ಗ್ರಾಮ ಪಂಚಾಯ್ತಿ) *3) ಬೆಳಗ್ಗೆ - 12:30 ಕ್ಕೆ -- ದೊಡ್ಡಬಾಣಗೆರೆ* (ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ) *4) 1:00 ಗಂಟೆಗೆ -- ವಾಜರಹಳ್ಳಿ* (ದ್ವಾರನಕುಂಟೆ ಗ್ರಾಮ ಪಂಚಾಯ್ತಿ) *5) 2:00 ಗಂಟೆಗೆ -- ಎಂ ಕೆ ಪಾಳ್ಯ* (ಕೊಟ್ಟಿ ಗ್ರಾಮ ಪಂಚಾಯ್ತಿ) ಪ್ರಕಟಣೆ : *ಸೇವಾ ಸದನ* *ವಿಧಾನ ಪರಿಷತ್ ಶಾಸಕರ ಗೃಹ ಕಚೇರಿ,* ...
Image

ಶಿರಾ ಕೆಎಸ್ಆರ್ಟಿಸಿ ಡಿಪೋದಿಂದ ನಾಳೆ ಹೊಸ ರೂಟ್ ಆರಂಭ

Image
ದಿನಾಂಕ 7. ಆಗಸ್ಟ್ 2023ರ ಸೋಮವಾರದಿಂದ ಶಿರಾ ಟು ಚಂಗಾವರ ಹೊಸ ಕೆಎಸ್‌ಆರ್‌ಟಿಸಿ ಬಸ್ ರೂಟ್ ಆರಂಭವಾಗಲಿದ್ದು ಪಟ್ಟ ನಾಯಕನಹಳ್ಳಿ ಹಾಗೂ ಶಿರಾ ನಗರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಸದರಿ ಬಸ್ಸು ಹೆಂದೊರೆ  ಬ್ರಹ್ಮಸಂದ್ರ ಮೂಲಕ ಶಿರಾ ಸೇರುತ್ತದೆ ಹೆಂದೊರೆ ಬ್ರಹ್ಮಸಂದ್ರ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ಬಸ್ ಸೌಕರ್ಯ ಇಲ್ಲದಿರುವುದರಿಂದ ಕಾಲೇಜಿಗೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಜ ಅಜಯ್ ಕರುನಾಡು ರಕ್ಷಣಾ ವೇದಿಕಯ ಚಂಗಾವರ ಮಧುಸೂದನ್ ಲಕ್ಕವ್ವನಹಳ್ಳಿ ಚಿಕ್ಕಣ್ಣ ಮಾಲಿಂಗು ಇತರರು ಕಳೆದ ನವಂಬರ್ ತಿಂಗಳಿನಿಂದ ಕೆಎಸ್ಆರ್ಟಿಸಿಗೆ ಅರ್ಜಿ ಸಲ್ಲಿಸಿ ಹೋರಾಟ ಪ್ರಾರಂಭಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗುತ್ತಿದ್ದಾಗ ಇವರೊಂದಿಗೆ ನಮ್ಮ ಆತ್ಮೀಯ ವಾಣಿ ಮಾಧ್ಯಮವು ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ಸುದ್ದಿಯನ್ನು ಬಿತ್ತರಿಸಿತ್ತು ತಡವಾಗಿಯಾದರೂ ಶಿರ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರು ಬಸ್ಸಿನ ಸೌಕರ್ಯ ಕಲ್ಪಿಸಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ