ಶಿರಾ ಕೆಎಸ್ಆರ್ಟಿಸಿ ಡಿಪೋದಿಂದ ನಾಳೆ ಹೊಸ ರೂಟ್ ಆರಂಭ


ದಿನಾಂಕ 7. ಆಗಸ್ಟ್ 2023ರ ಸೋಮವಾರದಿಂದ ಶಿರಾ ಟು ಚಂಗಾವರ ಹೊಸ ಕೆಎಸ್‌ಆರ್‌ಟಿಸಿ ಬಸ್ ರೂಟ್ ಆರಂಭವಾಗಲಿದ್ದು ಪಟ್ಟ ನಾಯಕನಹಳ್ಳಿ ಹಾಗೂ ಶಿರಾ ನಗರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಸದರಿ ಬಸ್ಸು ಹೆಂದೊರೆ  ಬ್ರಹ್ಮಸಂದ್ರ ಮೂಲಕ ಶಿರಾ ಸೇರುತ್ತದೆ ಹೆಂದೊರೆ ಬ್ರಹ್ಮಸಂದ್ರ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ಬಸ್ ಸೌಕರ್ಯ ಇಲ್ಲದಿರುವುದರಿಂದ ಕಾಲೇಜಿಗೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಜ ಅಜಯ್ ಕರುನಾಡು ರಕ್ಷಣಾ ವೇದಿಕಯ ಚಂಗಾವರ ಮಧುಸೂದನ್ ಲಕ್ಕವ್ವನಹಳ್ಳಿ ಚಿಕ್ಕಣ್ಣ ಮಾಲಿಂಗು ಇತರರು ಕಳೆದ ನವಂಬರ್ ತಿಂಗಳಿನಿಂದ ಕೆಎಸ್ಆರ್ಟಿಸಿಗೆ ಅರ್ಜಿ ಸಲ್ಲಿಸಿ ಹೋರಾಟ ಪ್ರಾರಂಭಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗುತ್ತಿದ್ದಾಗ ಇವರೊಂದಿಗೆ ನಮ್ಮ ಆತ್ಮೀಯ ವಾಣಿ ಮಾಧ್ಯಮವು ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ಸುದ್ದಿಯನ್ನು ಬಿತ್ತರಿಸಿತ್ತು ತಡವಾಗಿಯಾದರೂ ಶಿರ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರು ಬಸ್ಸಿನ ಸೌಕರ್ಯ ಕಲ್ಪಿಸಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ