)ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತಾ ರನ್ನು ಬಂಧಿಸಿರುವುದು ಕಂಡನಿಯ &ಕೂಡ್ಲೇ ಬಿಡುಗಡೆ ಮಾಡ ಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಚ್ಚರ (ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಸಯ್ಯದ್ ನಬಿ ) ಕರ್ನಾಟಕ ದಲ್ಲಿ ಕನ್ನಡಿಗನೇ ಸಾರ್ವಭೌಮ ಈ ನಾಡು ಜಲ ನೆಲ ಭಾಷೆ ಎಲ್ಲವೂ ನಮಗೆ ಶ್ರೇಷ್ಠ ವಾದದ್ದು ಬೇರೆ ರಾಜ್ಯದವರು ನಮ್ಮ ಮೇಲೆ ದಿನೇ ದಿನೇ ಒಂದು ರೀತಿಯ ದಬ್ಬಾಳಿಕೆ ಮಾಡುತ್ತಿದ್ದು ನಮ್ಮ ಕರ್ನಾಟಕ ದಲ್ಲಿ ಬಂದು ವ್ಯಾಪಾರ ವಹಿವಾಟು ಮಾಡುತ್ತಾ ಮುಂದೆ ಬೆಳೆದು ನಮ್ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿ ಕನ್ನಡ ನಾಮ ಫಲಕ ಹಾಕದೆ ಇವರದ್ದೇ ದರ್ಬಾರ್ ನಡೆಸುತ್ತಿದ್ದಾರೆ ಇದನ್ನ ಕರವೇ ಸಂಘಟನೆ ಖಂಡಿಸಿದಕೆ ಅವರ ಮೇಲೆ ಕೇಸ್ ಹಾಕಿ ಬಂಧಿಸಿ ದ್ದಾರೆ ಈ ಬಂಧನ ನಿಜಕ್ಕೂ ಒಳ್ಳೇದಲ್ಲ ರಾಜ್ಯ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಬಿಡುಗಡೆ ಮಾಡಬೇಕು ಇಲ್ಲಾ ವಾದಲ್ಲಿ ಇದರ ಪರಿಣಾಮ ಬೇರೆ ರೀತಿ ಆಗಲು ಅವಕಾಶ ಮಾಡಿ ಕೊಡಬೇಡಿ ಎಂದು ಸರ್ಕಾರ ಕೆ ಎಚ್ಚರಿಕೆ ಮಾತು ಮಾಧ್ಯಮ ದ ಮೂಲಕ ತಿಳಿಸುತ್ತೇವೆ (ವರದಿ ಸಯ್ಯದ್ ನಬಿ ಚಳ್ಳಕೆರೆ ಚಿತ್ರದುರ್ಗ )
Posts
Showing posts from December, 2023
ಶಿರಾ ತಾಲೂಕ್ ಹಾರೋಗೆರೆ ನ್ಯಾಯಬೆಲೆ ಅಂಗಡಿಯ ತನಿಖೆಯ ದಾರಿ ತಪ್ಪಿಸಿದ ಜಂಟಿ ನಿರ್ದೇಶಕ ಆಹಾರ ಇಲಾಖೆ ತುಮಕೂರು
- Get link
- X
- Other Apps
11-12-2023ಸೋಮವಾರ ಶಿರಾ ತಾಲೂಕಿನ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮೇಲೆ 2018 ರಲ್ಲಿ ಕೊಟ್ಟಿದ್ದ ದೂರಿನ ಆಧಾರದ ಮೇಲೆ ತನಿಖೆಗೆ ಚೆಂಟಿ ನಿರ್ದೇಶಕರು ಆಹಾರ ಇಲಾಖೆ ಇವರು ಮಾಡಬೇಕಾಗಿತ್ತು. ದೂರುದಾರನಾದ ಸಿದ್ಧ ಗಂಗಪ್ಪ ಯಲ್ಪೇನಹಳ್ಳಿ ಎಂಬುವರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸರಿ ಸುಮಾರು ರಾತ್ರಿ 9:30 ಗಂಟೆಗೆ ಫೋನ್ ಮೂಲಕ ಕರೆ ಮಾಡಿ ದಿನಾಂಕ 11 ರಂದು ಬೆಳಿಗ್ಗೆ 10:30ಕ್ಕೆ ಹಾರೋಗೆರೆಯ ನ್ಯಾಯಬೆಲೆ ಅಂಗಡಿಯ ಮುಂದೆ ಹಾಜರಾಗಬೇಕು ಎಂದು ತಿಳಿಸಿರುತ್ತಾರೆ. ಆದರೆ ಇವರು ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲಿ ಅಂದರೆ ರಾತ್ರಿ 9:00ಗೆ ಅನಧಿಕೃತವಾಗಿ ವಿಷಯ ತಿಳಿಸಿರುತ್ತಾರೆ. ಇದಕ್ಕೆ ಪೂರ್ವ ನಿಯೋಜಿತವಾಗಿ ನ್ಯಾಯಬೆಲೆ ಅಂಗಡಿಯ ಶಾಂತಪ್ಪ ಎನ್ನುವರಿಗೆ ಕರೆ ಮಾಡಿ ಅಂದು ರಾತ್ರಿ ಹಾರೋಗೆರೆ ಕಾಲೋನಿಯ ಕೆಲವು ಮಹಿಳೆಯರು ಮತ್ತು ಇತರರನ್ನು ನ್ಯಾಯಬೆಲೆ ಅಂಗಡಿಯ ಮಾಲೀಕರ ಪರವಾಗಿ ಮಾತನಾಡುವಂತಹವರನ್ನು ಕರೆಸಲು ಹೇಳಿರುತ್ತಾರೆ. ಆದರೆ ದೂರುದಾರನಿಗೆ ದೂರುದಾರರ ಪರವಾಗಿ ಮಾತನಾಡುವ ಯಾವುದೇ ರೇಷನ್ ಕಾರ್ಡ್ ತರನು ಕರೆಸುವಂತೆ ಸೂಚಿಸಿರಲಿಲ್ಲ ಬೆಳಗ್ಗೆ 10:30ಗೆ ಬರುವಂತೆ ಫೋನ್ ಮೂಲಕ ತಿಳಿಸಿದ್ದರಿಂದ ದೂರುದಾರ ಸಿದ್ದಗಂಗಪ್ಪ 10 ಗಂಟೆಗೆ ಸರಿಯಾಗಿ ಹಾರೋಗೆರೆಯ ನ್ಯಾಯ ಬೆಲೆ ಅಂಗಡಿಗೆ ಬಂದಿರುತ್ತಾನೆ, ಆದರೆ 10:30ಕ್ಕೆ ತನಿಖೆಗಾಗಿ ಕರೆದಿದ್ದ ಜೆಡಿರವರು ಸುಮಾರು ಮದ್ಯಾನ 12 ಮುಕ್ಕಾಲು ಆದರೂ ಬಂದಿರಲಿಲ್ಲ ತಡವಾಗಿ ಬಂದು ಏಕಮುಖವ...