ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ತುಂಗಾ ನದಿ ಪ್ರವಾಹದಿಂದ ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ಕಾರಣ ಮಂಗಳೂರು ಶೃಂಗೇರಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ
ಇದರಿಂದ ಸ್ಥಳೀಯ ಹಾಗೂ ಪ್ರವಾಸಿಗರು ಪರದಾಟ ಅನುಭವಿಸಿದಂತಾಗಿದೆ
ಕೊಪ್ಪ ತಾಲೂಕಿನ ಜಲದುರ್ಗ ಹಾಗೂ ಜಯಪುರ ಸಮೀಪ ರಾಜ್ಯ ಹೆದ್ದಾರಿ 27ರಲ್ಲಿ ಗುಡ್ಡ ಕುಸಿತ ಆಗಿದ್ದು ಶೃಂಗೇರಿ ಚಿಕ್ಕಮಗಳೂರು ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಾರಿ ಮಳೆಯಾಗುತ್ತಿದ್ದು ಮರಗಳು ರಸ್ತೆಗುರುಳಿ ಸಂಚಾರಕ್ಕೆ ತೊಂದರೆ ಆಗಿದೆ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಯಾದ್ಯಂತ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ
ಕೊಡಗು ಜಿಲ್ಲೆಯಲ್ಲಿಯೂ ಬರಿಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ ಪ್ರವಾಹದ ಅಬ್ಬರದಿಂದ ಕೊಡಗು ಜಿಲ್ಲೆಯಲ್ಲಿ ಅರ್ಚಕರು ಆಗು ಕುಟುಂಬ ಸೇರಿದಂತೆ 5 ನಾಪತ್ತೆ ಆಗಿದ್ದಾರೆ
ಮುಖ್ಯಮಂತ್ರಿ ಬಿ ಎಸ್ ವೈ ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಆದೇಶಿಸಿದ್ದು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ತೊಂದರೆಗೆ ಒಳಗಾದವರಿಗೆ ತಕ್ಷಣ 10ಸಾವಿರ ಪರಿಹಾರ ಹಾಗೂ ಪೂರ ಮನೆ ಕಳೆದುಕೊಂಡವರಿಗೆ 5ಲಕ್ಷ ಭಾಗಷಹ ಹಾನಿ ಆದವರಿಗೆ ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಒಟ್ಟಿನಲ್ಲಿ ಕರುನಾಡು ಮಳೆಯ ರುದ್ರ ನರ್ತನಕ್ಕೆ ನಲುಗಿ ಹೋಗಿದೆ.
Comments
Post a Comment