ಬೆಂಕಿ ಅವಘಡ, ಬಸ್ ಸುಟ್ಟು ಕರಕಲು
ಅಗಸ್ಟ್ 12, ಹಿರಿಯೂರು,
ಇಂದು ಮುಂಜಾನೆ ಹಿರಿಯೂರು ಸಿರಾ ರಾಸ್ಟ್ರಿಯ ಹೆದ್ದಾರಿ 48ರಲ್ಲಿ ಇದ್ದಕ್ಕಿದ್ದಂತೆ ಬಸ್ ಬೆಂಕಿಗಾಹುತಿ ಹಾಗಿ 5 ಜನ ಸಾವನ್ನಪ್ಪಿರುವ ಘಟನೆ ನೆಡೆದಿದೆ,
ಹಿರಿಯೂರು ಸಮೀಪ ಕಸ್ತುರಿರಂಗಪ್ಪನಹಳ್ಳಿ (ಕೆ ಆರ್ ಹಳ್ಳಿ )ಗೇಟ್ ಬಳಿ ಈ ಘಟನೆ ನೆಡೆದಿದೆ ಬಿಜಾಪುರ ದಿಂದ ಬೆಂಗಳೂರಿಗೆ ಬರುತ್ತಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಪೊಲೀಸ್ ಆಗೂ ಅಗ್ನಿಶಾಮಕದಳ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು
ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು ಅನೇಕರು ಚಿಂತಾಜನಕ ಸ್ಥಿತಿಯಲ್ಲಿ ಇದ್ದು ಗಾಯಗೊಂಡವರು ಹಿರಿಯೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Comments
Post a Comment