ಭೂತುಮಟ್ಟದ ಸಭೆ ಪಕ್ಷ ಬಲವರ್ಧನೆಗೆ ಜಿಲ್ಲಾಧ್ಯಕ್ಷರ ಪ್ರವಾಸ

ಸಿರಾ ಸೆಪ್ಟೆಂಬರ್ 1
ಸಿರಾ ವಿಧಾನಸಭೆ ಕ್ಷೇತ್ರ ಈಗ ರಾಜ್ಯದ ರಾಜಕೀಯ ಕಾವು ಹೆಚ್ಚಿಸಿದ ಕ್ಷೇತ್ರವಾಗಿ ಹೊರಹೊಮ್ಮಿದೆ ಕಾರಣ ಇಲ್ಲಿನ ಶಾಸಕರಾದ ಬಿ ಸತ್ಯನಾರಾಯಣ ರವರು ವಿಧಿವಶ ರಾದ ಮೇಲೆ ಕ್ಷೇತ್ರಕ್ಕೆ ಮರುಚುನಾವಣೆ ನೆಡೆಯಲಿದ್ದು ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ ಇದುವರೆಗೂ ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ನೆಡೆಸಿದ್ದು ಅಭಿವೃದ್ಧಿ ವಿಷಯದಲ್ಲಿ ವೇಗ ಪಡೆದುಕೊಂಡಿಲ್ಲ 
ಬಿಜೆಪಿ ಅಭ್ಯರ್ಥಿಗಳು ಕಳೆದ ಚುನಾವಣೆಗಳಲ್ಲಿ ಒಂದು ಹಂತದ ಮತಗಳನ್ನು ಪಡೆಯುವ ಮೂಲಕ ಪಕ್ಷಕ್ಕೆ ಪಕ್ಷಕ್ಕೆ ನೆಲೆಯನ್ನು ಕಲ್ಪಿಸಿದ್ದಾರೆ.  ಸಿರಾ ಕ್ಷೇತ್ರದಲ್ಲಿ  ಸಂಘಪರಿವಾರ  (ಆರ್ ಎಸ್ ಎಸ್, ವಿ ಎಚ್ ಪಿ  ಬಜರಂಗದಳ, ಇತರೆ )ತನ್ನ ಗಟ್ಟಿ ನೆಲೆಯನ್ನು ಹೊಂದಿದ್ದು  ಬಿಜೆಪಿ ಉತ್ತಮ ಕಾರ್ಯಕರ್ತರ  ಪಡೆ  ಹೊಂದಿದೆ. 
ಈ ಎಲ್ಲ ಕಾರಣಗಳಿಂದ ಈ ಬಾರಿ ಕ್ಷೇತ್ರದಲ್ಲಿ  ಉತ್ತಮವಾಗಿ  ಯೋಜನೆ ಮಾಡಿದರೆ  ಬಿಜೆಪಿ ಮೊದಲ ಬಾರಿಗೆ ಸ್ಥಾನ  ತೆರೆಯಬಹುದು ,ಎಂಬ ಲೆಕ್ಕಾಚಾರದಿಂದ  ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುರೇಶಗೌಡ ರವರು  ಅತಿ ಹುಮ್ಮಸಿನಿಂದ  ಭೂತ್ ಮಟ್ಟದಿಂದ  ಕಾರ್ಯಕರ್ತರನ್ನು ಸಂಘಟಿಸಲು  ಇಂದು ಸಿರ ತಾಲ್ಲೂಕಿನ  ಮಾಗೋಡು  ಪಂಚಾಯತ್ ನಿಂದ  ಈ  ಕಾರ್ಯಕ್ರಮ  ಆರಂಭಿಸಿದ್ದಾರೆ  ಮಾಗೋಡು ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು ಗಿರಿನಾಥನಹಳ್ಳಿ, ಹಲ್ಕೂರು, ಬೋರಸಂದ್ರ, ಗುಳೆಗೇನಹಳ್ಳಿ, ಚನ್ನನಕುಂಟೆ  ಗ್ರಾಮಗಳಲ್ಲಿ ಭೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ನೆಡೆಸಿ ಪಕ್ಷ ಸಂಘಟನೆ ಮಾಡಿದರು ಕಾರ್ಯಕರ್ತರಿಂದ ಹಹವಾಲು ಹಾಗೂ  ಸಲಹೆಗಳನ್ನು  ಸ್ವೀಕರಿಸಿ  ಮಾತನಾಡಿದ ಸುರೇಶ್ ಗೌಡರು  ತಾಲೂಕಿನಲ್ಲಿ ಆಡಳಿತ ನೆಡೆಸಿದವರು ಅಭಿರುದ್ದಿಗೆ  ವೇಗ ಒದಗಿಸಿಲ್ಲ,  ನೀರಿನ ವಿಚಾರದಲ್ಲಿ  ಆಡಳಿತರೂಢ  ನಮ್ಮಪಕ್ಷ ಸಿರಾ ತಾಲೂಕಿಗೆ ನ್ಯಾಯ ಒದಗಿಸಿದ್ದು ಮದಲೂರು ಕೆರೆಗೆ ನೀರು ಹರಿಸುವುದು ಜೊತೆಗೆ  ಭದ್ರಾ  ನಾಲೆಯಿಂದ ಸಿರಾ ತಾಲೂಕಿನ  ಬಹುತೇಕ ಕೆರೆ ತುಂಬಿಸುವ  ಭರವಸೆ ನೀಡಿದರು 
ಕಾರ್ಯಕ್ರಮದಲ್ಲಿ ಕಳೆದ ಸುಮಾರು ವರ್ಷಗಳಿಂದ ಪಕ್ಷದ ಶಿಸ್ತಿನ ಸಿಪಾಯಿ ಅದ ಸೊಗಡು ಶಿವಣ್ಣ,, ತುಮಕೂರು ಜಿಲ್ಲಾ (ಬಿಜೆಪಿ )ಸಹಪ್ರಭಾರಿ  ಲಕ್ಶ್ಮಿಶ್ ಪಾಲ್ಗೊಂಡಿದ್ದರು 
ಕಾರ್ಯಕ್ರಮದಲ್ಲಿ ಸುಮಾರು ವರ್ಷಗಳಿಂದ  ಕ್ಷೇತ್ರದಲ್ಲಿ  ಪಕ್ಷ ಸಂಘಟನೆ ಮಾಡಿ ಬೇರು ಮಟ್ಟದ  ಕಾರ್ಯಕರ್ತರ ಪಡೆ ಸೃಷ್ಟಿಸಿದ  ಬಿ ಕೆ  ಮಂಜುನಾಥ್ (ಜಿಲ್ಲಾ ಪ್ರದಾನ ಕಾರ್ಯದರ್ಶಿ ), ತಾಲ್ಲೂಕು ಗ್ರಾಮಾಂತರ ಮಾಜಿ ಅಧ್ಯಕ್ಷರಾದ ಮಾಲಿ ಮರಿಯಪ್ಪ, ಹಾಲಿ ಅಧ್ಯಕ್ಷ ರಂಗಸ್ವಾಮಿ  ನಗರ ಅಧ್ಯಕ್ಷ ವಿಜಯರಾಜ್, ತುಮುಲ್  ನಿರ್ದೇಶಕ ಎಸ್ ಆರ್ ಗೌಡ  ಇನ್ನುಮುಂತಾದವರು  ಭಾಗವಹಿಸಿದ್ದರು 






Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ