ಟಾರ್ಗೆಟ್ ಟಿಬಿಜೆ
02ಅಕ್ಟೋಬರ್
ಇಂದು ಸಿರಾ ಕ್ಷೇತ್ರದ ಬರಗೂರಿನಲ್ಲಿ ಮಹಾ ಶಕ್ತಿ ಕೇಂದ್ರಗಳ ಸಭೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಪ್ರತಿ ಹಂತದಲ್ಲೂ ಟಿಬಿಜೆ ಅವರನ್ನ ಟಾರ್ಗೆಟ್ ಮಾಡಿ ಮಾತನ್ನಾಡಿದರು ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಸನ್ಮಾನ್ಯ ಪಿ ಎಂ ರಂಗನಾತಪ್ಪ ಅವರ ಕಾಲದಲ್ಲಿ. 9ಟಿಎಂಸಿ ನೀರು ಮುಂಜೂರ್ ಆಗಿದ್ದು ನಂತರ ಬಂದ ಜಯಚಂದ್ರ ರವರು ಇದರಲ್ಲಿ ಕಳ್ಳಂಬೆಳ್ಳ ಮತ್ತು ಸಿರಾ ಕುಡಿಯುವ ನೀರಿಗೆ. 06ಟಿಎಂಸಿ ಉಪಯೋಗಿಸಿ ಇನ್ನು03ಟಿಎಂಸಿನೀರಿನ ಲಭ್ಯತೆ ಇದ್ದರು ಏಕೆ ತರಲಿಲ್ಲ ಎಂದು ಪ್ರಶ್ನಿಸಿದರು ತಮ್ಮ ಭಾಷಣದ ಪ್ರತಿ ಹಂತದಲ್ಲೂ ಟಿಬಿಜೆ ಯವರನ್ನ ಕೆಣಕಿದ ಸುರೇಶ ಗೌಡ ಈ ಕ್ಷೇತ್ರದಿಂದ 2ಬಾರಿ ಗೆದ್ದು ಸಚಿವರಾಗಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಏಕೆ ನೀರು ಮದಲೂರು ಕೆರೆಗೆ ಹರಿಸಲಾಗಲಿಲ್ಲ ಎಂದು ಪ್ರಶ್ನಿಸಿದರು
ಈ ಇಂದೇ ಎಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮದಲೂರು ಕೆರೆಗೆ ನೀರು ಹರಿಸಲು ತೀರ್ಮಾನಿಸಿ ಕಾಲುವೆ ನಿರ್ಮಾಣಕ್ಕೆ ಹಣ ಮುಂಜೂರು ಮಾಡಿದ್ದನ್ನ ಜನರಿಗೆ ಜ್ಞಾಪಿಸುತ್ತಾ ಕೇವಲ ಎರಡೂವರೆ ವರ್ಷ ನಮಗೆ ಅವಕಾಶ ಕೊಡಿ ಭದ್ರ ನೀರು ಹರಿಸಿ ಶಿರಾ ತಾಲೂಕಿನ ಅನೇಕ ಕೆರೆಗೆ ನೀರು ತುಂಬಿಸಿ ಸಿರಾ ಕ್ಷೇತ್ರವನ್ನ ಸಮಗ್ರ ಅಭಿರುದ್ದಿಪಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ನಿಮ್ಮ ಮುಂದೆ ನಿಲ್ಲುತ್ತೇವೆ ಎಂದು ವಿನಂತಿಸಿದರು
Comments
Post a Comment