ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

: ಬಡ ಮಾರನಹಳ್ಳಿ ಪೊರಕೆ ಮಂಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಇವರನ್ನು ಗ್ರಾಮಸ್ಥರು ಸನ್ಮಾನಿಸಿದರು.
 ಬರಗೂರು ನೈರ್ಮಲ್ಯತೆ ಕಾಪಾಡುವಲ್ಲಿ ಗ್ರಾಮದ ಜನತೆ ಹೆಚ್ಚಿನ ಆದ್ಯತೆ ಪ್ರೋತ್ಸಾಹ ನೀಡಿದಾಗ ಗ್ರಾಮದ ನೈರ್ಮಲ್ಯತೆ ಹಿಂದೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಮಾಜ ಸೇವಕ ಬಡ ಮಾರನಹಳ್ಳಿ ಪೊರಕೆ ಮಂಜಣ್ಣ ಹೇಳಿದರು 
ಶ್ರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಗೋಪಿ ಕುಂಟೆ ಗ್ರಾಮದಲ್ಲಿ ಭಾನುವಾರ ನಡೆದ ಗ್ರಾಮ ಸ್ವಚ್ಛತೆ ಆಂದೋಲನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪೊರಕೆ ಹಿಡಿದು ಬೆಂಗಳೂರಿನಲ್ಲಿ ಸಮಾಜ ಸೇವೆಗೆ ಆದ್ಯತೆ ನೀಡಿ ಹಳ್ಳಿಗಳಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಕೆಲಸವಾಗುತ್ತದೆ ಹಳ್ಳಿಗಳು ಸ್ವಚ್ಛತೆ ಅಭಿವೃದ್ಧಿ ಕಂಡಾಗ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಕಾಣಲು ಸಾಧ್ಯ ರಸ್ತೆ ಬಿದ್ದಿರುವ ಹಳೆ ಮನೆಗಳು ತೆರವು ಮಾಡಿದಾಗ ಗ್ರಾಮವನ್ನು ಅಂದವಾಗಿರಿಸಲು ಸಹಕಾರಿಯಾಗುತ್ತದೆ ಎಂದರು.
ಹೊಸಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್ ಮಾತನಾಡಿ ಸ್ವಚ್ಛತೆ ಇದ್ದಲ್ಲಿ ದೇವರು ಇರುತ್ತಾನೆ ಅಂದ್ರೆ ಸ್ವಯಂ ಜಾಡು ಮಾಲಿಗಳಾದರೆ ಗ್ರಾಮ ಸ್ವಚ್ಛತೆ ಕಾಣಲು ಸಾಧ್ಯ ಸಮಗ್ರ ಸ್ವಚ್ಛತೆ ಮಾಡುವ ಸಹಕಾರಕ್ಕೆ ನಮ್ಮ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಜಯರಾಮಯ್ಯ ಮಾತನಾಡಿ ಗ್ರಾಮಗಳಲ್ಲಿ ಸ್ವಚ್ಛತೆಗೆ ಪ್ರತಿಯೊಬ್ಬರ ಸಹಕಾರ ನೀಡಿದಾಗ ಗ್ರಾಮದ ಅಭಿವೃದ್ಧಿ ಹೊಂದಲು ಸಾಧ್ಯ, 
ನಿವೃತ್ತ ದೈಹಿಕ ಶಿಕ್ಷಕ ಕುಮಾರ್ ಮಾತನಾಡಿ ಗ್ರಾಮದಲ್ಲಿ ನಾವೆಲ್ಲ ಒಂದಾಗಿ ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮಾದರಿಯ ಗ್ರಾಮಕ್ಕೆ ಸಹಕಾರ ನೀಡುತ್ತೇವೆ ಎಂದರು.
ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಸದಸ್ಯ ಪ್ರಸನ್ನ ಕುಮಾರ್ ಗ್ರಾಮದ ಮುಖಂಡ ಜಯರಾಮ್, ಸಿದ್ದೇಶ್, ಕಮಲ್ ನಾಬ್, ನರಸಿಂಹಯ್ಯ, ಚಂದ್ರು, ಇದ್ದರು.
 ಗ್ರಾಮ ಸ್ವಚ್ಛತೆ ಪೂರ್ವಭಾವಿ ಸಭೆ ನಂತರ ಪ್ರಾಯೋಗಿಕವಾಗಿ ರಸ್ತೆಗಳಲ್ಲಿ ಸ್ವಚ್ಛತೆ ಮಾಡಿದರು.

Comments

Popular posts from this blog

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ